Method:
ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ
ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ
ಒಂದು ಪಾತ್ರೆಯಲ್ಲಿ (cooker ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿ
ಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬೇಳೆ, ಹಸಿರು ಮೆಣಸು, ಕರಿಬೇವು, ದ್ರಾಕ್ಷಿ, ಗೋಡಂಬಿ ಹಾಕಿ ಒಗ್ಗರಣೆ ಕೊಡಿ
ಇದಕ್ಕೆ ಕಾಯಿ ಹಾಲು, ಅಕ್ಕಿ ಹಾಕಿ, ಅಕ್ಕಿ ಬೇಯಲು ಬಿಡಿ
ಬಿಸಿ ಬಿಸಿ ಕೊಕನಟ್ ರೈಸಿ ರೆಡಿ.
ಕಾಯಿ ಹಾಲಿನಲ್ಲೇ ಬೆಂದ ಅಕ್ಕಿ, ರುಚಿಯಾಗಿರುತ್ತದೆ.
ನಿಮ್ಮ ಗಮದಲ್ಲಿರಲಿ:
೧ ಕಪ್ ಅಕ್ಕಿಗೆ, ೨ ಕಪ್ ಕಾಯಿ ಹಾಲು ಸಾಕು. ಆದರೆ ಕೆಲವು ವೇಳೆ, ಕೆಲವು ವಿಧದ ಅಕ್ಕಿ ಬೇಯಲು ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಕಾಯಿ ಹಾಲು ಬೇಕಾಗಬಹುದು. ಅದಕ್ಕೆ, ಮೊದಲೆ ೧/೨ ಕಪ್ ಜಾಸ್ತಿ ಕಾಯಿ ಹಾಲು ತಯಾರಿಸಿಡುವುದು ಉತ್ತಮ.
Cooker ನಲ್ಲಿ ೨-೩ ಕೂಗು ಬರಿಸಿಯೂ ತಯಾರಿಸಬಹುದು. ಆದರೆ ಅದರ ರುಚಿ ಸ್ವಲ್ಪ different ಆಗಿರುತ್ತದೆ.
ಮೇಲಿನ ರೀತಿಯಲ್ಲಿ ತಯಾರಿಸುವುದಾದರೆ, ಅಕ್ಕಿ ಬೇಯಲು ಒಲೆಯ ಮೇಲೆ ಇರುವಾಗ, ತಳ ಹಿಡಿಯದಂತೆ ನೋಡಿಕೊಳ್ಳಿ.
Ingredients needed:
ಬಾಸ್ ಮತಿ ಅಕ್ಕಿ / ಜೀರಿಗೆ ಅಕ್ಕಿ - ೧ ಕಪ್
ಕಾಯಿ ಹಾಲು - ೨ ರಿಂದ ೨ ೧/೨ ಕಪ್
ಒಗ್ಗರಣೆಗೆ:
ಸಾಸಿವೆ
ಕಡಲೆಬೇಳೆ
ಕರಿಬೇವು ಸೊಪ್ಪು
ಎಣ್ಣೆ
ದ್ರಾಕ್ಷಿ
ಗೋಡಂಬಿ
ಸಣ್ಣಗೆ ತುಂಡರಿಸಿದ ಹಸಿರು ಮೆಣಸು



