ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿ
ಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ, ಪರಿಮಳ ಬಂದೊಡನೆ ಅದನ್ನು ಮೇಲಿನ ಸಾಮಾಗ್ರಿಗಳಿರುವ ಪಾತ್ರಗೆ ಹಾಕಿ
ಅವಲಕ್ಕಿಯ ಮೇಲೆ ಸ್ವಲ್ಪ ನೀರು ಚಿಮುಕಿಸಿ, ನಿಂಬೆ ರಸ ಸೇರಿಸಿ
ಚೆನ್ನಾಗಿ ಬೆರೆಸಿ (ನಮ್ಮಲ್ಲಿ ಈ ರೀತಿ ಬೆರೆಸುವುದಕ್ಕೆ - ಮೊರೆಸುವುದು ಎನ್ನುತ್ತೇವೆ)
ರುಚಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ...




