- ಬೆಳಗ್ಗೆ ಎದ್ದೊಡನೆ ದೋಸೆ ಅಕ್ಕಿ ನೆನೆಸಿಟ್ಟುಕೊಳ್ಳಿ.
- ಕಾಯಿ ತುರಿ, ಉಪ್ಪು, ಹುಳಿ, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸು ಸೇರಿಸಿ ರುಬ್ಬಿಕೊಳ್ಳಿ.
- ಈ ಮಿಶ್ರಣಕ್ಕೆ ನೆನೆದ ಅಕ್ಕಿಯನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
- ಹಾಗೆ ತಯಾರಾದ ಹಿಟ್ಟಿಗೆ ಕ್ಯಾಬೇಜ್ ಅನ್ನು ಜೊತೆ ಸೇರಿಸಿ ಇಡಿ.
- Cooker ಅಥವಾ ಇಡ್ಲಿ ಅಟ್ಟದಲ್ಲಿ ನೀರು ಹಾಕಿ ಒಲೆಯ ಮೇಲೆ ಇಡಿ.
- ಒಂದು ಅಗಲದ ಪಾತ್ರೆಯನ್ನು ನೀರಿನ ಮೇಲಿಟ್ಟು, ತಯಾರಿಸಿದ ಮಿಶ್ರಣವನ್ನು ಒಂದೊಂದೆ ಹಿಡಿಯಂತೆ, ಈ ಪಾತ್ರೆಯಲ್ಲಿ ಇಡಿ.
- ಹವೆ/ಹಬೆಯಲ್ಲಿ ಬೇಯಿಸಿ.
- ೨೦ ನಿಮಿಷದಲ್ಲಿ ಕ್ಯಾಬೇಜ್ ಗಟ್ಟಿ ರೆಡಿ.
ಟಿಪ್:
- ರುಬ್ಬಿಕೊಳ್ಳುವಾಗ ನೀರು ಬೇಕಿರುವಷ್ಟೇ ಹಾಕಿ, ಇಲ್ಲವಾದರೆ ಗಟ್ಟಿ ಕಟ್ಟಲು ಕಷ್ಟವಾದೀತು.
- ಕ್ಯಾಬೇಜ್ ಗಟ್ಟಿಯನ್ನು ಬೆಣ್ಣೆಯೊಂದಿಗೆ ಸವಿದರೆ, ಬಲು ರುಚಿ.




